Wednesday, September 7, 2016

ವೈರಾಗ್ಯ ತು0ಬಿದ ಈ ಜೀವನದಲ್ಲಿ..
ಕವಿದಿದೆ ಬರೀ ಮ0ಕು...
ಮುಖದ ವೇಶ ಬದಲಾಯಿಸಿ ಎಷ್ಟು ದಿವಸ ಉಳಿಯಲು ಸಾಧ್ಯ. ..
ದೇವರ ನಿಯಮ ಅರ್ಥ ಮಾಡಿಕೊಳ್ಳಲು ಎಲ್ಲರಿಗೂ ಅಸಾಧ್ಯ. ..
                                             -ಲೋಶ್ಲೋ

ಯಶಸ್ಸು..!!?

ಇರುಳಷ್ಟೇ ಇರದು
ಹಗಲೂ ಬಾರದಿರದು,
ಹಗಲುಗನಸಲ್ಲೇ ದಿನ ಕಳೆದು;
ರಾತ್ರಿಯಲ್ಲ ನಿದಿರೆಯ 
ಮದಿರೆಯ ಆರಾಧನೆ,
ಏನು ಮಾಡಲಾಗಲಿಲ್ಲ
ಎಂಬ ಚಿಂತೆ ಪ್ರತಿದಿನ;
ಬರಿ ಕನಸ ಕನವರಿಕೆಯಲ್ಲೇ
ಮುಗಿಯಿತೆ ಜೀವನ,
ನಾ ಅಡಿಯಿಡದೆ
ಮುಂದೆ, ಅಡಿಗಡಿಗೆ
ಅಳುತಿದ್ದರೇನು ಚೆಂದ..? ,
ಪಯಣ ಆರಂಭಿಸಿದ ಮೇಲೇನೆ
ನೋವು ನಲಿವಿನ ದರ್ಶನ,
ಅವಿರತ ಪರಿಶ್ರಮದ ನಂತರವೇ
ಬಾಳ ವೇದಿಕೆಯಲ್ಲಿ ಯಶಸ್ಸಿನ ನರ್ತನ..
                           -ಬುಕ್ಕಾಪಟ್ಟಣ ಮೋಹನ್

Monday, September 5, 2016

ಬಾಧ್ರಪದವು ಬಂದಿರಲು,
ಖುಷಿ ಎಲ್ಲೆಡೆ ತುಂಬಿರಲು;
ಆದಿವಂದಿತ ಬರುತಿಹನು,
ಸಂಭ್ರಮವ ತರುತಿಹನು;

ವರವ ನೀಡೊ ವರಪ್ರದಾಯಕ,
ಬುದ್ಧಿ ಕೊಡೊ ಸಿದ್ಧಿವಿನಾಯಕ;
ಬೆನಕ ಬೆನಕ ಬೆನಕ ಎನ್ನಲು,
ಮನದಲಿ ಹೊಸ ಪುಳಕ;

ಮೋದಕಪ್ರಿಯ ಮುದ್ದು ಗಣಪ,
ಗೌರಿಸುತ ಸುಂದರ ರೂಪ;
ರಾವಣದರ್ಪ ವಿನಾಶಕ,
ಗಣಗಳ ಅಧಿಪತಿ ಗಣನಾಯಕ;

ಲಂಬೋದರ ನೀ ತ್ರಿಜಗ ವಣ್ದಿತ,
ಕಾವ್ಯ ನಾಟ್ಯ ಶಾಸ್ತ್ರ ಪರಿಣಿತ;
ಬದುಕ ಮಾಡು ನೀ ಸುಲಲಿತ,
ಪೂರೈಸು ನಮ್ಮ ಮನದ ಇಷ್ಟಾರ್ಥ..
                           - ಬುಕ್ಕಾಪಟ್ಟಣ ಮೋಹನ್

Sunday, September 4, 2016

ಕೆಂಡಕಟ್ಟಿ ಕೂಡಲಾದೀತೆ ಮಡಿಲಲಿ,
ಸುಡದೇ ಬಿಟ್ಟೀತೇ ಮೊದಲು ನಿನ್ನ ಒಡಲ,
ನೆರೆಹೊರೆಯವರಲ್ಲಿ ಹಗೆ ಇಟ್ಟುಕೊಂಡು
ಪಾಕಿಗಳು ಸಾಧಿಸಿದ್ದಾದರೂ ಏನು..?
ಆಗಾಗ್ಗೆ ಮದ್ದು ಗುಂಡುಗಳ ಹೊಗೆ..
ಅಮಾಯಕರ ಬಲಿತೆಗೆದು ಖುಷಿಪಡುವ
ಬಂದೂಕು ಬಾಂಬುಗಳ ನಗೆ..!!
                              -ಬುಕ್ಕಾಪಟ್ಟಣ ಮೋಹನ್