Saturday, May 9, 2015

ತಾಯಿಗೊಂದು ಪುಟ್ಟ 
ಕೊಡುಗೆ 
ಕೇಳದೆ ಜನ್ಮವನಿತ್ತೆ
ಕೇಳದೆ ಪ್ರೀತಿ ಮಾಡಿದೆ 
ಕೇಳದೆ ಮಾತು ಕಲಿಸಿದೆ 
ಕೇಳದೆ ಬೆಳೆಸಿದೆ 
ಏನನ್ನೂ ಮತ್ತೆ ಬಯಸದೆ ಹಿಂದಿರುಗಿ ... 
ನಿನ್ನ ಜೀವವನ್ನೇ ನಮಗಾಗಿ ತೇದೆ ... 
ನಿನ್ನೀರುಣವ ತೀರಿಸಲು ಸಾದ್ಯವೇ ... 
ಎಂದೆಂದಿಗೂ .... 
                    -ಲೋಹಿತ್ ಶರ್ಮಾ ಲೋಕೇಶ್

Friday, May 8, 2015

ನಿನ್ನೀ ಅಂದದ ನಗುಮೊಗವ ..
ಯಾರೊಬ್ಬರೂ ತಿಳಿದಿಲ್ಲವಾ ಅದರ ಅಂತರಾಳವ ....
ಹೇಳುತಿವೆ ಆ ನಿನ್ನ ಕಣ್ಣುಗಳೇ ನಿನ್ನ ಕಥೆಯನ್ನು ....
ಏಕಿಷ್ಟು ಪ್ರಯತ್ನ ಮರೆಮಾಚಲು ಎಲ್ಲವನ್ನೂ ....
ಹಗುರಾಗಲು ಮನಸ್ಸು ...
ತೆರೆದಿಡು ನನ್ನ ಬಳಿಯಾದರೂ ನಿನ್ನ ಮನಸಿನ ಮಾತನ್ನು ...
ಕಾದು ಕುಳಿತಿದೆ ನನ್ನೀ ಕೈಗಳು .... ನಿನ್ನ ಸಂತೈಸಲು ....
                                               -ಬಿಂದುಶ್ರೀ ಎನ್