Tuesday, June 16, 2015

ಇಂಪಾದ ಪಕ್ಷಿಯ ಕಲರವ ಕೇಳಲು
ನಿನ್ನ ದನಿಯು ನೆನೆಪಾಗುವುದು
ನಿನ್ನ ದನಿಯು ಕೇಳಲು
ನನ್ನ ಜೀವ ನವಿರಾಗುವುದು 
                    -ಲೋಹಿತ್ ಶರ್ಮಾ ಲೋಕೇಶ್
ಉತ್ತರವ ಕೊಡದೇ ನೀ ಕಾಡಿದೆ ಗೆಳತಿ
ಬರೀ ಪ್ರಶ್ನೆಯೇ ಉಳಿದಿದೆ ಈ ಆಂತರ್ಯದಲ್ಲಿ
ಹೆಂಗರುಳಿನಿಂದ , ಬೇಗ ಉತ್ತರಿಸು ಮನವ ಹಗುರಗೊಳಿಸು
ಉಸಿರಾಡಲು ನೆರವಾಗು .. 
                                                        -ಲೋಶ್ಲೋ

Saturday, May 9, 2015

ತಾಯಿಗೊಂದು ಪುಟ್ಟ 
ಕೊಡುಗೆ 
ಕೇಳದೆ ಜನ್ಮವನಿತ್ತೆ
ಕೇಳದೆ ಪ್ರೀತಿ ಮಾಡಿದೆ 
ಕೇಳದೆ ಮಾತು ಕಲಿಸಿದೆ 
ಕೇಳದೆ ಬೆಳೆಸಿದೆ 
ಏನನ್ನೂ ಮತ್ತೆ ಬಯಸದೆ ಹಿಂದಿರುಗಿ ... 
ನಿನ್ನ ಜೀವವನ್ನೇ ನಮಗಾಗಿ ತೇದೆ ... 
ನಿನ್ನೀರುಣವ ತೀರಿಸಲು ಸಾದ್ಯವೇ ... 
ಎಂದೆಂದಿಗೂ .... 
                    -ಲೋಹಿತ್ ಶರ್ಮಾ ಲೋಕೇಶ್

Friday, May 8, 2015

ನಿನ್ನೀ ಅಂದದ ನಗುಮೊಗವ ..
ಯಾರೊಬ್ಬರೂ ತಿಳಿದಿಲ್ಲವಾ ಅದರ ಅಂತರಾಳವ ....
ಹೇಳುತಿವೆ ಆ ನಿನ್ನ ಕಣ್ಣುಗಳೇ ನಿನ್ನ ಕಥೆಯನ್ನು ....
ಏಕಿಷ್ಟು ಪ್ರಯತ್ನ ಮರೆಮಾಚಲು ಎಲ್ಲವನ್ನೂ ....
ಹಗುರಾಗಲು ಮನಸ್ಸು ...
ತೆರೆದಿಡು ನನ್ನ ಬಳಿಯಾದರೂ ನಿನ್ನ ಮನಸಿನ ಮಾತನ್ನು ...
ಕಾದು ಕುಳಿತಿದೆ ನನ್ನೀ ಕೈಗಳು .... ನಿನ್ನ ಸಂತೈಸಲು ....
                                               -ಬಿಂದುಶ್ರೀ ಎನ್ 

Tuesday, April 28, 2015

ಹುಟ್ಟು ಹಬ್ಬ 
ಈ ದಿನ ನಿನ್ನ ಜನುಮದಿನ ... 
ತಾಯಿ ಸಂತೋಷದಿಂದ ಕಣ್ಣೀರಿಟ್ಟ ದಿನ ... 
ತಾಯಿ ಮರುಜನ್ಮವ ಪಡೆದ ದಿನ ... 
ಅವಳ ಆಸೆ ಈಡೇರಿದ ಸುದಿನ .... 
                
                        - ಲೋಹಿತ್ ಶರ್ಮಾ ಲೋಕೇಶ್  

Friday, April 10, 2015

ಪ್ರೀತಿಯ ಜೋಗುಳ

ಚಂದಿರನ ತೊಟ್ಟಿಲಲಿ,
ತಂಪಾದ ಗಾಳಿಯ ಬೀಸುವೆ .....
ಈ ನನ್ನ ಹೃದಯದಲಿ,
ಪ್ರೀತಿಯ ಜೋಗುಳ ಹಾಡುವೆ ....
                            -ಲೋಹಿತ್ ಶರ್ಮಾ ಲೋಕೇಶ್ 

Monday, March 23, 2015

ಮನಸಿನ ವೇದನೆ 

ನೀನಿರದೆ ಬಾಳಿನಲಿ ಸಂಕಟವು ಆಗಿಹುದು ..
ನೀನೇನು ಮಾಡುವೆಯೋ ನನಗೇನು ತಿಳಿದಿಹುದು ...
ತಿಳಿದೂ ನೀ ಹೋಗುತ್ತಿರುವೆ ದೂರ ...
ಮನಸ್ಸಿಗೆ ಆಗುತ್ತಿದೆ ತುಂಬಾ ಭಾರ ... 

                                      -  ಲೋಹಿತ್ ಶರ್ಮಾ ಲೋಕೇಶ್ 

ಆಶಯ 

ನಿನ್ನ ಮರೆಯುವುದು ಯೋಚಿಸಲಾಗದ ವಿಷಯ ... 
ನಿನ್ನ ನೆನೆಯುವುದು ಮರೆಯಲಾಗದ ವಿಷಯ ... 
ಆದರೆ ಇದೆ ಇಲ್ಲಿ ಮುಖ್ಯ ವಿಷಯ ... 
ನೀಡು ನಿನ್ನ ಹೃದಯದಲ್ಲಿ ಮತ್ತೊಮ್ಮೆ ಪ್ರೀತಿಯ ಆಶಯ .... 
                                             - ಲೋಹಿತ್ ಶರ್ಮಾ ಲೋಕೇಶ್ 

Sunday, March 22, 2015

ಕಾಮನಬಿಲ್ಲು

 ಮುದ್ದಾದ ಮುಖದಲ್ಲಿ ಮುಗುಳುನಗೆಯಿರಲಿ ....  

ಕಪ್ಪು ಬಿಳುಪು ಕಣ್ಣುಗಳಲಿ ಬಣ್ಣಗಳು ಬೆಸೆಯಲಿ ....

ನಿನ್ನ ಬಾಳು ಎಂದೆಂದೂ ಕಾಮನಬಿಲ್ಲಿನಂತಿರಲಿ .....
                                                               -ಲೋಶ್ಲೋ