Friday, December 23, 2016

ಮೌನ...

ಯಾಕೀ ಕಡೆಗಣಿಸುವ ಮೌನ...
ಮಾತನಾಡುವುದಕ್ಕೆ ಇಷ್ಟವಿಲ್ಲದಿದ್ದರೆ ಹೇಳಿ ಬಿಡು ಇನ್ನ...
ನೋಡಿಯೂ ನೊಡದ○ತೆ ಹೋಗುವೆ ಮು○ದೆ...
ಮರೆತು ಎಲ್ಲ ಸ್ನೇಹವ ಹಿ○ದೆ...
                                           -ಲೋಶ್ಲೋ

Thursday, November 24, 2016

ಆದಿ

ನೀ ದೂರವಿದ್ದರೂ ಕನಸಲಿ ಸನಿಹ,
ನೀ ಕಾಡದಿದ್ದರೂ ಮನಸಲಿ ಕಲಹ,
ನನ್ನ ಈ ಸ್ತಿಥಿಗೆ ಕಾರಣವೆ ವಿರಹ,
ಆದಕ್ಕೆ ಶುರು ಮಾಡಿದೆ ಕವಿತೆಯಾ ಬರಹ....
                             -ಲೋಶ್ಲೋ

Wednesday, November 23, 2016

ಕಣ್ಣಲೇನಿಟ್ಟಿಹನಾಬ್ರಹ್ಮ ದಿಟ್ಟಿಸಿ
ನೋಡುತಿರುವೆ ನಾ ನಿನ್ನ..
ಕಂಗೆಟ್ಟು ಕನವರಿಸಿ ನಿನ್ನ ಹೆಸರು,
ಏರು- ಪೇರಾಗಿದೆ ನನ್ನುಸಿರು.
             -ಬುಕ್ಕಾಪಟ್ಟಣ ಮೋಹನ್

ಆತ್ಮಹತ್ಯೆ...?!!

ಆತ್ಮಹತ್ಯೆ..?
ಸತ್ತವರ ಮನೆಯಲ್ಲಿ ಕೆಡಲೇನಿದೆ,
ಅಳುದುಳಿದ ಹಾಲು ಮೊಸರು;
ಸಾವಿಗೆ ಶರಣಾಗುವ ಮುನ್ನ
ಕುಳಿತು ನೀ ಯೋಚಿಸು ಒಂದು ಕ್ಷಣ;
ಬೆಳಕು ಇರುವುದು ತುಸು ಹತ್ತಿರದಲ್ಲೆ,
ಕತ್ತಲಿಗೆ ಹೆದರಿ ಕಣ್ಮುಚ್ಚಿದರೆ
ಬೆಳಕೆಲ್ಲಿಂದ ಬಂದೀತು?
ನಿನ್ನ ನಂಬಿದವರ ಬಾಳೆಲ್ಲ ಹುಳುಕು.
ಇದ್ದು ಸಾಧಿಸು ಎನಾದರೊಂದು..
ದೇವನಿರುವ ಜೊತೆಗೆ ಎಂದೆಂದೂ..
-ಬುಕ್ಕಾಪಟ್ಟಣ ಮೋಹನ್

Wednesday, September 7, 2016

ವೈರಾಗ್ಯ ತು0ಬಿದ ಈ ಜೀವನದಲ್ಲಿ..
ಕವಿದಿದೆ ಬರೀ ಮ0ಕು...
ಮುಖದ ವೇಶ ಬದಲಾಯಿಸಿ ಎಷ್ಟು ದಿವಸ ಉಳಿಯಲು ಸಾಧ್ಯ. ..
ದೇವರ ನಿಯಮ ಅರ್ಥ ಮಾಡಿಕೊಳ್ಳಲು ಎಲ್ಲರಿಗೂ ಅಸಾಧ್ಯ. ..
                                             -ಲೋಶ್ಲೋ

ಯಶಸ್ಸು..!!?

ಇರುಳಷ್ಟೇ ಇರದು
ಹಗಲೂ ಬಾರದಿರದು,
ಹಗಲುಗನಸಲ್ಲೇ ದಿನ ಕಳೆದು;
ರಾತ್ರಿಯಲ್ಲ ನಿದಿರೆಯ 
ಮದಿರೆಯ ಆರಾಧನೆ,
ಏನು ಮಾಡಲಾಗಲಿಲ್ಲ
ಎಂಬ ಚಿಂತೆ ಪ್ರತಿದಿನ;
ಬರಿ ಕನಸ ಕನವರಿಕೆಯಲ್ಲೇ
ಮುಗಿಯಿತೆ ಜೀವನ,
ನಾ ಅಡಿಯಿಡದೆ
ಮುಂದೆ, ಅಡಿಗಡಿಗೆ
ಅಳುತಿದ್ದರೇನು ಚೆಂದ..? ,
ಪಯಣ ಆರಂಭಿಸಿದ ಮೇಲೇನೆ
ನೋವು ನಲಿವಿನ ದರ್ಶನ,
ಅವಿರತ ಪರಿಶ್ರಮದ ನಂತರವೇ
ಬಾಳ ವೇದಿಕೆಯಲ್ಲಿ ಯಶಸ್ಸಿನ ನರ್ತನ..
                           -ಬುಕ್ಕಾಪಟ್ಟಣ ಮೋಹನ್

Monday, September 5, 2016

ಬಾಧ್ರಪದವು ಬಂದಿರಲು,
ಖುಷಿ ಎಲ್ಲೆಡೆ ತುಂಬಿರಲು;
ಆದಿವಂದಿತ ಬರುತಿಹನು,
ಸಂಭ್ರಮವ ತರುತಿಹನು;

ವರವ ನೀಡೊ ವರಪ್ರದಾಯಕ,
ಬುದ್ಧಿ ಕೊಡೊ ಸಿದ್ಧಿವಿನಾಯಕ;
ಬೆನಕ ಬೆನಕ ಬೆನಕ ಎನ್ನಲು,
ಮನದಲಿ ಹೊಸ ಪುಳಕ;

ಮೋದಕಪ್ರಿಯ ಮುದ್ದು ಗಣಪ,
ಗೌರಿಸುತ ಸುಂದರ ರೂಪ;
ರಾವಣದರ್ಪ ವಿನಾಶಕ,
ಗಣಗಳ ಅಧಿಪತಿ ಗಣನಾಯಕ;

ಲಂಬೋದರ ನೀ ತ್ರಿಜಗ ವಣ್ದಿತ,
ಕಾವ್ಯ ನಾಟ್ಯ ಶಾಸ್ತ್ರ ಪರಿಣಿತ;
ಬದುಕ ಮಾಡು ನೀ ಸುಲಲಿತ,
ಪೂರೈಸು ನಮ್ಮ ಮನದ ಇಷ್ಟಾರ್ಥ..
                           - ಬುಕ್ಕಾಪಟ್ಟಣ ಮೋಹನ್

Sunday, September 4, 2016

ಕೆಂಡಕಟ್ಟಿ ಕೂಡಲಾದೀತೆ ಮಡಿಲಲಿ,
ಸುಡದೇ ಬಿಟ್ಟೀತೇ ಮೊದಲು ನಿನ್ನ ಒಡಲ,
ನೆರೆಹೊರೆಯವರಲ್ಲಿ ಹಗೆ ಇಟ್ಟುಕೊಂಡು
ಪಾಕಿಗಳು ಸಾಧಿಸಿದ್ದಾದರೂ ಏನು..?
ಆಗಾಗ್ಗೆ ಮದ್ದು ಗುಂಡುಗಳ ಹೊಗೆ..
ಅಮಾಯಕರ ಬಲಿತೆಗೆದು ಖುಷಿಪಡುವ
ಬಂದೂಕು ಬಾಂಬುಗಳ ನಗೆ..!!
                              -ಬುಕ್ಕಾಪಟ್ಟಣ ಮೋಹನ್

Wednesday, March 30, 2016

ಅಗಲಿಕೆ


ನೀನಿರದೆ ಬಾಳಿನಲಿ ಸಂಕಟವು ಆಗಿಹುದು...
ನೀನೇನು ಮಾಡುವೆಯೋ ನನಗೇನು ತಿಳಿದಿಹುದು...
ತಿಳಿದೂ ನೀ ಹೋಗುತ್ತಿರುವೆ ದೂರ...
ಮನಸ್ಸಿಗೆ ಆಗುತ್ತಿದೆ ತುಂಬಾ ಭಾರ....


ಕಾತುರದಿಂದ ಕಾಯುತ್ತಿರಲು ನಾನು ..
ಬೇಡದೆ  ವರವನ್ನು ನೀಡು ನೀನು ...
ಕಾತುರವ ನೀಗಿಸು, ಆಸೆಯ ಇಡೇರಿಸು ...
ಮರುಜನ್ಮವ ನೀಡಿ ತಾಯಿಯಾಗು ...
                                       -ಲೋಶ್ಲೋ